ಬೆಳಗಾವಿ ನಗರವನ್ನು ತಿಳಿದುಕೊಳ್ಳಿ
ಇದು ತನ್ನ ನೆರೆಹೊರೆಯಲ್ಲಿ ಪತ್ತೆಯಾದ ತಾಮ್ರದ ಫಲಕಗಳ ಶಾಸನಗಳ ಪ್ರಕಾರ, ಒಂದೊಮ್ಮೆ ಕದಂಬ ರಾಜರುಗಳ ರಾಜಧಾನಿಯಾಗಿತ್ತು.
ಬೆಳಗಾವಿ ನಗರವನ್ನು ತಿಳಿದುಕೊಳ್ಳಿ
‘ವೇಣು ಗ್ರಾಮ’ ಅಥವಾ ‘ಬಿದಿರು ಹಳ್ಳಿ’ ಎಂದೂ ಕರೆಯಲ್ಪಡುವ ಬೆಳಗಾವಿಯು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ. ಇದು ಆಡಳಿತದ ವಿಭಾಗೀಯ ಕೇಂದ್ರ ಮತ್ತು ಜಿಲ್ಲಾಡಳಿತ ಕೇಂದ್ರವಾಗಿದೆ. ಇದನ್ನು ಕರ್ನಾಟಕದ ಎರಡನೇ ರಾಜಧಾನಿಯೆಂದೂ ಕರೆಯುತ್ತಾರೆ. ಜಿಲ್ಲೆಯ ಅತ್ಯಂತ ಪುರಾತನ ಸ್ಥಳವೆಂದರೆ ಹಲಸಿ. ಇದು ತನ್ನ ನೆರೆಹೊರೆಯಲ್ಲಿ ಪತ್ತೆಯಾದ ತಾಮ್ರದ ಫಲಕಗಳ ಶಾಸನಗಳ ಪ್ರಕಾರ, ಒಂದೊಮ್ಮೆ ಕದಂಬ ರಾಜರುಗಳ ರಾಜಧಾನಿಯಾಗಿತ್ತು. 6ನೇ ಶತಮಾನದ ಮಧ್ಯಭಾಗದಿಂದ ಸುಮಾರು 760ರವರೆಗೆ ಈ ಪ್ರದೇಶವನ್ನು ರಾಷ್ಟ್ರಕೂಟರಿಂದ ಪಡೆದು ಚಾಲುಕ್ಯರು ನಡೆಸಿದರು. ರಾಷ್ಟ್ರಕೂಟರ ಅಧಿಕಾರದ ವಿಘಟನೆಯಿಂದ ಇದರ ಒಂದು ಭಾಗವು ರಟ್ಟ (875-1250) ರಲ್ಲಿ ಉಳಿದುಕೊಂಡಿತು. ಇವರು 1210 ರಿಂದ ವೇಣುಗ್ರಾಮವವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಜಿಲ್ಲೆಯ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಹಿಡಿದಿಟ್ಟುಕೊಳ್ಳುವ 12 ನೇ ಶತಮಾನದ ನಂತರದ ವರ್ಷಗಳಲ್ಲಿ ಯಶಸ್ವಿಯಾದ ಗೋವಾದ ರಟ್ಟರು ಮತ್ತು ಕದಂಬರ ನಡುವಿನ ಸುದೀರ್ಘ ಹೋರಾಟದ ಬಗ್ಗೆ ಈ ಶಾಸನಗಳು ಸಾಕ್ಷಿ ನೀಡುತ್ತವೆ. ಆದರೆ 1208 ರ ಹೊತ್ತಿಗೆ ಕದಂಬರನ್ನು ರಟ್ಟರು ಪದಚ್ಯುತಗೊಳಿಸಿದರು. ನಂತರ 1250ರಲ್ಲಿ ಅವರು ದೇವಗಿರಿಯ ಯಾದವರಿಗೆ ತುತ್ತಾದರು
ಭಾರತದ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರ ಪ್ರತಿಷ್ಟಿತ ಯೋಜನೆಯಾದ “ಸ್ಮಾರ್ಟಸಿಟಿ ಮಿಶನ್”ನಲ್ಲಿ ಭಾರತದ 100 ನಗರಗಳಲ್ಲಿ ಒಂದು ಸ್ಮಾರ್ಟ ನಗರವೆಂದು ಅಭಿವೃದ್ಧಿಪಡಿಸಲು ಮೊದಲ 20 ನಗರಗಳಲ್ಲಿ ಬೆಳಗಾವಿಯು ಮೊದಲ ಹಂತದಲ್ಲಿ ಆಯ್ಕೆಯಾಗಿದೆ.
ಈ ನಗರವು ಕರ್ನಾಟಕದ ವಾಯವ್ಯ ಭಾಗದಲ್ಲಿದೆ ಮತ್ತು ಪಶ್ಚಿಮ ಘಟ್ಟದ ಗೋವಾ ಮತ್ತು ಮಹಾರಾಷ್ಟ್ರಗಳ ಗಡಿಗೆ ಹೊಂದಿಕೊಂಡಿದೆ. (ಗೋವಾ ರಾಜ್ಯದ ಗಡಿಯಿಂದ 50 ಕಿ,ಮೀ ಅಂತರದಲ್ಲಿದೆ) ಇದು ಬೆಂಗಳೂರಿನಿಂದ 502 ಕಿ.ಮೀ. ಹೈದರಾಬಾದ್‍ನಿಂದ 515 ಕಿ.ಮೀ ಮತ್ತು ಮುಂಬೈನಿಂದ 500ಕಿ.ಮೀ. ಅಂತರದಲ್ಲಿದೆ. ಬೆಳಗಾವಿಯು ರಾಜ್ಯದ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ.
ಬೆಳಗಾವಿಯು ಸೇನೆಗೆ ಸಂಬಂಧಿಸಿದ ಮರಾಠಾ ಲೈಟ ಇನ್ಫ್ರಂಟ್ರಿ ರೆಜಿಮೆಂಟಲ್ ಸೆಂಟರ್ (ಎಂ.ಎಲ್.ಐ.ಅರ್.ಸಿ) ಯನ್ನು ಹೊಂದಿದ್ದು ಇದು ಕಮಾಂಡೋ ತರಬೇತಿ ವಿಭಾಗವನ್ನು ಹೊಂದಿದೆ. ಇದು ಮಹೋಹ್ ಎಂಬ ಪದಾತಿ ಸೈನ್ಯದ ಶಾಲೆಯ ಭಾಗವಾಗಿದೆ. ಇಲ್ಲಿ ದೇಶದ ಸೇನಾ ಕಮಾಂಡೋಗಳಿಗೆ ಸಹಿಷ್ಣುತೆ, ಶತ್ರು ಸೇನೆಯಿಂದ ತಪ್ಪಿಸಿಕೊಳ್ಳುವಿಕೆ, ಗೆರಿಲ್ಲಾ ಮಾದರಿ ಮತ್ತು ಕಮಾಂಡೋ ಯುದ್ಧದ ತಂತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಬೆಳಗಾವಿಯಲ್ಲಿರುವ ಈ ಕಮಾಂಡೋ ಕೋರ್ಸ ತರಬೇತಿಯು ಎಲ್ಲಾ ಪದಾತಿ ಅಧಿಕಾರಿಗಳಿಗೆ ಕಡ್ಡಾಯವಾಗಿದೆ. ಅಲ್ಲದೇ, ಇತರ ಶಸ್ತ್ರಾಸ್ತ ಸೇವೆಗಳ ಅಧಿಕಾರಿಗಳು ಮತ್ತು ಕೆಲವು ವಿದೇಶಿ ಅಧಿಕಾರಿಗಳೂ ಸಹ ಈ ತರಬೇತಿ ಪಡೆಯುತ್ತಾರೆ. ಬೆಳಗಾವಿಯು ಉಷ್ಣವಲಯದ ಸವನ್ನಾ ವಾತಾವರಣವನ್ನು ಹೊಂದಿದೆ. ಇದು ವರ್ಷಪೂರ್ತಿ ಆಹ್ಲಾದಕರ ಹವಾಮಾನಕ್ಕೆ ಹೆಸರು ವಾಸಿಯಾಗಿದೆ. ಚಳಿಗಾಲದ ನವಂಬರ್– ನಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿ ಇಲ್ಲಿನ ಕನಿಷ್ಟ ಉಷ್ಣಾಂಶವು 7 ಡಿಗ್ರಿ ಸೆಲ್ಸಿಯಸ್ ಇರುವುದಾಗಿ ದಾಖಲಾಗಿದೆ ಮತ್ತು ಜೂನ್ ನಿಂದ ಸೆಪ್ಟಂಬರ್ ವರೆಗೆ ಬಹುತೇಕ ಮಳೆಯಾಗುತ್ತಿದ್ದು, ಬೆಳಗಾವಿಯು ಏಪ್ರಿಲ್‍ನಲ್ಲಿ ಕೆಲವೊಮ್ಮೆ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯನ್ನು ಕೂಡ ಎದುರಿಸುತ್ತದೆ.
ಶೈಕ್ಷಣಿಕ ಸಂಸ್ಥೆಗಳು
ಬೆಳಗಾವಿಯು ಎಂಟು ಇಂಜಿನೀಯರಿಂಗ್, ಐದು ವೈದ್ಯಕೀಯ ಕಾಲೇಜುಗಳು, ಹಾಗೂ ನಗರ ಮತ್ತು ಜಿಲ್ಲೆಯ ಕೆಲವು ದಂತ ಕಾಲೇಜುಗಳನ್ನು ಒಳಗೊಂಡಿರುವ ಒಂದು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ.ತಾಂತ್ರಿಕ ಶಿಕ್ಷಣಕ್ಕಾಗಿ ( ಬಿಇ, ಎಂಟೆಕ್, ಎಂಸಿಎ, ಎಂಬಿಎ) ಕರ್ನಾಟಕದ ಅತಿ ದೊಡ್ಡ ವಿಶ್ವವಿದ್ಯಾಲಯವಾದ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯಲ್ಲಿದೆ. 9 ಮೂಲ ಪದವಿ ಕಾಲೇಜುಗಳು, 9 ಪಾಲಿಟೆಕ್ನಿಕ್ ಕಾಲೇಜುಗಳು 3 ಕಾನೂನು ಕಾಲೇಜುಗಳು ಇತರೆ ಶೈಕ್ಷಣಿಕ ಸಂಸ್ಥೆಗಳಾಗಿವೆ. ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ (ಕೆಎಲ್‍ಇ) ಮತ್ತು ಕರ್ನಾಟಕ ಲಾ ಸೊಸೈಟಿಗಳು (ಕೆಎಲ್‍ಎಸ್) ಬೆಳಗಾವಿ ಮೂಲದ ಎರಡು ಶೈಕ್ಷಣಿಕ ದೈತ್ಯ ಸಂಸ್ಥೆಗಳಾಗಿವೆ.
1970 ರ ದಶಕದ ಅಂತ್ಯದಿಂದ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುವ ಮೂಲಕ ಬೆಳಗಾವಿಯು ಆರಂಭವಾಯಿತು.ಪ್ರಾರಂಭದಲ್ಲಿ ಇದು ವೈದ್ಯಕೀಯ ಮತ್ತು ಎಂಜನೀಯರಿಂಗ್ ಕ್ಷೇತ್ರಗಳಲ್ಲಿ ಹೆಚ್ಚಾಗಿತ್ತು.ಆದರೆ ಇಂದು ಬೆಳಗಾವಿಯು ಅನೇಕ ವೃತ್ತಿಪರ ಸ್ಟ್ರೀಮಗಳನ್ನು ಒದಗಿಸುವ ಸಂಸ್ಥೆಗಳನ್ನು ಬೆಳಗಾವಿ ಹೊಂದಿದೆ.
1998ರಲ್ಲಿ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸ್ಥಾಪನೆಯಾದ ನಂತರ 208ಕ್ಕಿಂತಲೂ ಹೆಚ್ಚು ತಾಂತ್ರ್ರಿಕ ಕಾಲೇಜುಗಳು ಸಂಯೋಜನೆಗೊಳ್ಳುವ ಮೂಲಕ ಕರ್ನಾಟಕದಲ್ಲಿ ಬೆಳಗಾವಿಯು ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮುವ ಮೂಲಕ ಪ್ರಾಮುಖ್ಯತೆಯನ್ನು ಪಡೆಯಿತು. ಬೆಳಗಾವಿಯಲ್ಲಿ ಹಲವಾರು ವೈದ್ಯಕೀಯ ಕಾಲೇಜುಗಳಿವೆ. ಭಾರತದಾದ್ಯಂತ (ಮತ್ತು ಜಗತಿನಾದ್ಯಂತವೂ) ವಿದ್ಯಾರ್ಥಿಗಳ ಒಳಹರಿವಿನ ಕಾರಣದಿಂದಾಗಿ ಮತ್ತು ಈ ಬೆಳವಣಿಗೆಯ ಪ್ರಭಾವವು ನಗರದಾದ್ಯಂತ ಸಾಂಸ್ಕ್ರತಿಕ, ಭಾಷಾ, ಮತ್ತು ಕೈಗಾರಿಕಾ ಪ್ರೋಫೈಲ್‍ಗಳನ್ನು ಗಣನೀಯವಾಗಿ ಬದಲಿಸಿದೆ. ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಶಿಕ್ಷಣವನ್ನು ಪೂರೈಸಿದ ನಂತರ ಬೆಳಗಾವಿಯನ್ನುತಮ್ಮ ತವರೂರನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.
ರಕ್ಷಣಾ ತರಬೇತಿ ಕೇಂದ್ರಗಳು
ಬೆಳಗಾವಿಯ ಸೌಮ್ಯ ಹವಾಮಾನ, ಪೋರ್ಚಗೀಸ್ ಗೋವಾದ ಬಳಿಯ, ಕರಾವಳಿ ಹತ್ತಿರವಿರುವ, ಆಯಕಟ್ಟಿನ ಸ್ಥಾನಮಾನ ಹೊಂದಿರುವ ಬ್ರಿಟಿಷ್ ಸೈನ್ಯದ ತರಬೇತಿ ಕೇಂದ್ರ ಮತ್ತು ಕ್ಯಾಂಟೋನಮೆಂಟ್ ಸೂಕ್ತ ಸ್ಥಳವೆಂದು ಶ್ಲಾಘನೆಗೊಳಪಟ್ಟಿತ್ತು.ಅದು ಇಂದು ಭಾರತೀಯ ಸೈನ್ಯಗಳಿಗೆಮತ್ತು ಏರ್ ಪೋರ್ಸ ಸ್ಟೇಶನ್, ಮುಂದುವರೆಯುತ್ತದೆ.ಬ್ರಿಟಿಷರು ಬೆಳಗಾವಿಯ ಬೌಗೋಳಿಕ ಸ್ಥಳದ ಮಿಲಿಟರಿ ಪ್ರಾಮುಖ್ಯತೆಯನ್ನ್ಯು ಅರಿತುಕೊಂಡ ನಂತರ ಇಲ್ಲಿ ಗಮನಾರ್ಹ ಪದಾತಿ ದಳವನ್ನು ಹೊಂದಿದ್ದರು. ಬಹುಶಃ ಇದುವೇ ಬೆಳಗಾವಿಯನ್ನು “ಸುಶಿಕ್ಷಿತ ಪದಾತಿಸೈನ್ಯದ ತೊಟ್ಟಿಲು” ಎಂದು ಕರೆಯುವುದಕ್ಕೆ ಕಾರಣವಾಗಿರಬಹುದು.
ಸಂಪನ್ಮೂಲಗಳು ಮತ್ತು ನಂತರದ ಸೈನ್ಯದ ಚಲನೆಗೆ ರೇಲ್ವೆ ಜಾಲವನ್ನು ಅಭಿವೃದ್ದಿ ಪಡಿಸುವುದು ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷರು ಭಾರತವನ್ನು ನಿಯಂತ್ರಿಸಲು ಮಾಡಿರುವ ಒಂದು ವಿಧಾನವಾಗಿದೆ. ಬೆಳಗಾವಿ ಲೈಟ ಇನ್ಪ್ರಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‍ಐಆರ್ ಸಿ) ಯನ್ನು ಹೊಂದಿದೆ. ಇದು ಕಮಾಂಡೋ ತರಬೇತಿ ವಿಭಾಗವನ್ನು ಹೊಂದಿದೆ. ಇದು ಮಹೋರ್ ಎಂಬ ಪದಾತಿ ಸೈನ್ಯದ ಶಾಲೆಯ ಭಾಗವಾಗಿದೆ.ಇಲ್ಲಿ ದೇಶದ ಕಮಾಂಡೋಗಳಿಗೆ ಸಹಿಷ್ಣುತೆ, ತಪ್ಪಿಸುಕೊಳ್ಳುವಿಕೆ ಗೆರಿಲ್ಲಾ ಮತ್ತು ಕಮಾಂಡೋ ಯುದ್ಧ ತಂತ್ರದ ತಂತ್ರಗಳು, ಮತ್ತು ಭೂರಹಿತವಾಗಿ ಜೀವಿಸಲು ತರಬೇತಿ ನೀಡಲಾಗುತ್ತದೆ.
ಬೆಳಗಾವಿಯಲ್ಲಿ ಕಮಾಂಡೊ ಕೋರ್ಸ ತರಬೇತಿಯು ಎಲ್ಲ ಪದಾತಿ ಅಧಿಕಾರಿಗಳಿಗೆ ಕಡ್ಡಾಯವಾಗಿದೆ.ಇತರ ಶಸ್ತಾಸ್ತ್ರ ಮತ್ತು ಸೇವೆಗಳ ಅಧಿಕಾರಿಗಳು ಮತ್ತು ಕೆಲವು ವಿದೇಶಿ ಅಧಿಕಾರಗಳೂ ಸಹ ತರಬೇತಿ ಪಡೆಯುತ್ತಾರೆ. ಮಿಲಿಟರಿ ಆಸ್ಪತ್ರೆ ಮತ್ತು ತರಬೇತಿ ಕೇಂದ್ರದ ಮಧ್ಯದಲ್ಲಿ 1945 ರಲ್ಲಿ ಸ್ಥಾಪಿತವಾದ ಪ್ರಸಿದ್ದ ಬೆಳಗಾವಿ ಮಿಲಿಟರಿ ಶಾಲೆ 64 ಎಕರೆಗಳಷ್ಟು ವಿಸ್ತಾರವಾಗಿದೆ.