ಬೆಳಗಾವಿ ಸ್ಮಾರ್ಟ್ ಸಿಟಿಯ ಬಗ್ಗೆ
ಸ್ಮಾರ್ಟ ಸಿಟಿ ಎಂದರೇನು ಎಂಬ ಮೊದಲ ಪ್ರಶ್ನೆಗೆ ಉತ್ತರವಾಗಿ, ಸ್ಮಾರ್ಟ ಸಿಟಿಗೆ ಸಾರ್ವತ್ರಿಕವಾಗಿ ಅಂಗೀಕಾರವಾದ ವ್ಯಾಖ್ಯಾನವಿರುವುದಿಲ್ಲ.
ಸ್ಮಾರ್ಟ ಸಿಟಿ ಎಂದರೇನು?
ಸ್ಮಾರ್ಟ ಸಿಟಿ ಎಂದರೇನು ಎಂಬ ಮೊದಲ ಪ್ರಶ್ನೆಗೆ ಉತ್ತರವಾಗಿ, ಸ್ಮಾರ್ಟ ಸಿಟಿಗೆ ಸಾರ್ವತ್ರಿಕವಾಗಿ ಅಂಗೀಕಾರವಾದ ವ್ಯಾಖ್ಯಾನವಿರುವುದಿಲ್ಲ. ಇದನ್ನು ನಾನಾ ವಿಧದಲ್ಲಿ ಅರ್ಥೈಸಲಾಗುತ್ತದೆ. ಹೀಗಾಗಿ ‘ಸ್ಮಾರ್ಟ ಸಿಟಿ’ ಕಲ್ಪನೆಯು ನಗರದಿಂದ ನಗರಕ್ಕೆ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ನಗರದ ಸಂಪನ್ಮೂಲ ಮತ್ತು ಇಲ್ಲಿನ ನಿವಾಸಿಗಳ ಆಕಾಂಕ್ಷೆಗಳನ್ನು ಬದಲಾಯಿಸುವ ಮತ್ತು ಸುಧಾರಿಸಲು ಅಭಿವೃದ್ದಿಯ ಇಚ್ಛೆಯ ಮಟ್ಟವನ್ನು ಆಧರಿಸಿರುತ್ತದೆ. ಉದಾಹರಣೆಗೆ ಯುರೋಪಗಿಂತಲೂ ಭಾರತದಲ್ಲಿ ಸ್ಮಾರ್ಟಸಿಟಿ ವ್ಯಾಖ್ಯಾನವನ್ನು ಅರ್ಥೈಸಲಾಗುತ್ತದೆ. ಭಾರತದಲ್ಲಿ ಸ್ಮಾರ್ಟಸಿಟಿಯನ್ನು ವ್ಯಾಖ್ಯಾನಿಸಲು ಒಂದೇ ಪ್ಯಾನ್ ಸಿಟಿ ಉಪಕ್ರಮಗಳು ನಾಗರಿಕ ಕೇಂದ್ರಿತ ಇ-ಆಡಳಿತ ಪರಿಹಾರಗಳು, ಉಪಯುಕ್ತತೆ ನಿರ್ವಹಣೆ ಮತ್ತು ಇತರ ಸ್ಮಾರ್ಟ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದಾಗಿದೆ. ಈ ರೀತಿಯಾಗಿ ಸಮಗ್ರ ಅಭಿವೃದ್ಧಿಯು ಜೀವನದ ಗುಣಮಟ್ಟವನ್ನು ಸುಧಾರಿಸಿ ಕೌಶಲ್ಯ ಭರಿತ ಉದ್ಯೋಗ ಸೃಷ್ಟಿಸುತ್ತದೆ ಮತ್ತು ಎಲ್ಲರಿಗೂ ಆದಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಬಡವರು ಮತ್ತು ಹಿಂದುಳಿದವರು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಹೊಂದಿದ ನಗರವಾಗಿ ಮಾರ್ಪಡುತ್ತದೆ.
- • ಸ್ಮಾರ್ಟ್ ಸಾರಿಗೆ ಮತ್ತು ಚಲನಶೀಲತೆ (ಬಸ್ ಗಳ ಓಡಾಟದ ವೇಳಾಪಟ್ಟಿ, ಉಚಿತ ವೈ-ಫೈ, ಸುಜ್ಜಿತ ಬಸ್ ಶೆಲ್ಟರ್ ಇತ್ಯಾದಿ)
- • ಸ್ಮಾರ್ಟ್ ಆರೋಗ್ಯ (ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧುನೀಕರಣ, ತ್ವರಿತ ಅಂಬ್ಯುಲೆನ್ಸ್ ಸೇವೆ)
- • ಸ್ಮಾರ್ಟ್ ಘನತ್ಯಾಜ್ಯ ನಿರ್ವಹಣೆ (ಮನೆ ಮನೆಗಳಿಂದ ಹಸಿ ಮತ್ತು ಒಣ ಕಸ ಸಂಗ್ರಹ ಮತ್ತು ವಿಲೇವಾರಿ ಹಾಗೂ ಇದಕ್ಕಾಗಿ ಸ್ವೀಪರ್ ಮಶೀನ್ ಬಳಕೆ)
- ಸ್ಮಾರ್ಟ್ ವಸತಿ ಮತ್ತು ಅಂತರ್ಗತತೆ
- ಸ್ಮಾರ್ಟ್ ಗುಣಮಟ್ಟ ಚಾಲಿತ ಯೋಜನೆಗಳು
ಬೆಳಗಾವಿ ಸ್ಮಾರ್ಟ ಸಿಟಿ ವೈಶಿಷ್ಟ್ಯತೆಗಳು
- ಪ್ರದೇಶ ಆಧಾರಿತ ಬೆಳವಣಿಗೆ ಯೋಜನೆಯಲ್ಲಿ ಮಿಶ್ರ ಭೂಮಿ ಬಳಕೆಯನ್ನು ಉತ್ತೇಜಿಸುವುದು
- ವಸತಿ ಮತ್ತು ಅಂತರ್ಗತತೆ
- ನಡೆದಾಡುವ ಪ್ರದೇಶಗಳನ್ನು ರಚಿಸುವುದು.
- ಉದ್ಯಾನವನಗಳು, ಆಟದ ಮೈದಾನಗಳು ಮತ್ತು ನಾಗರಿಕ
- ವಿವಿಧ ಸಾರಿಗೆ ಆಯ್ಕೆಗಳನ್ನು ಉತ್ತೇಜಿಸುವುದು. ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್ ಮೆಂಟ್ (ಟಿಓಡಿ), ಸಾರ್ವಜನಿಕ ಸಾರಿಗೆ ಮತ್ತು ಕೊನೆಯ ಮೈಲಿ ಸಾರಿಗೆ ಸಂಪರ್ಕವನ್ನು ಅಭಿವೃದ್ದಿ ಪಡಿಸುವುದು.
- ಆಡಳಿತವನ್ನು ನಾಗರಿಕ ಸ್ನೇಹಿ ಮತ್ತು ವೆಚ್ಚದ ಪರಿಣಾಮಕಾರಿತ್ವವನ್ನಾಗಿ ಮಾಡುವುದು.
- ಪ್ರಮುಖ ಆರ್ಥಿಕ ಚಟುವಟಿಕೆಗಳ ಆಧಾರದ ಮೇಲೆ ನಗರಕ್ಕೆ ಒಂದು ಗುರುತನ್ನು ಒದಗಿಸುವುದು.
- ಪ್ರದೇಶವನ್ನು ಆಧರಿಸಿದ ಅಭಿವೃದ್ಧಿಯಲ್ಲಿ ಮೂಲ ಸೌಕರ್ಯ ಮತ್ತು ಸೇವೆಗಳಿಗೆ ಸ್ಮಾರ್ಟ ಪರಿಹಾರಗಳನ್ನು ಅಳವಡಿಸಿ ಅವುಗಳನ್ನು ಉತ್ತಮಗೊಳಿಸುವುದು.